ನಾನು ನಿನ್ನವ ಪ್ರಿಯಾ ಕರ್ತನೆ
1.ನಾನು ನಿನ್ನವ, ಪ್ರಿಯ ಕರ್ತನೆ; ನಿನ್ನ ವಾಕ್ಯ ಕೇಳಿದೆ,
ಇನ್ನು ಕೇವಲ ನಿನ್ನನ್ನೋನ್ಯಕ್ಕೆ ಸೇರೋದೆನ್ನ ಕೋರಿಕೆ
ಪಲ್ಲವಿ :
ಎಳೆ ನನ್ನ ಎಳೆ, ಪ್ರಿಯ ಕರ್ತನೇ,
ನಿನ್ನ ಕ್ರೂಜೆ ಕಂಬಕ್ಕೆ
ಎಳೆ ನನ್ನ, ಎಳೆ, ಪ್ರಿಯ ಕರ್ತನೇ,
ನಿನ್ನ ತಿವಿದೆದೆಗೆ !
2. ನಿನ್ನ ಸೇವೆಗೆ, ಪ್ರಿಯ ರಕ್ಷಕ ನೀ ಪ್ರತಿಷ್ಠಿಸೆನ್ನನ್ನು
ದಯಪಾಲಿಸು ದೃಢನಿಶ್ಚಯ! ನಿನ್ನ ಚಿತ್ತ ನನ್ನದು
3. ನಾನು ಒರಗಿ ನಿನ್ನ ಪಾದಕ್ಕೆ ಸುಸಂವಾದ ಮಾಡುತ್ತ
ನಿನ್ನ ಸಂಗಡ ಇರ್ವ ಗಳಿಗೆ ಎಂಥಮೂಲ್ಯ ಸಂತಸ!
4. ತಳವಿಲ್ಲದ ಪ್ರೀತಿಸಾಗರ ! ಬುದ್ಧ್ಯ ತೀತ ಹರ್ಷವೇ
ನನಗಾಗಲು ನಿನ್ನ ದರ್ಶನ ನಿತ್ಯ ಸ್ತೋತ್ರ ನಿನಗೆ !
1. Nanu ninnava priya kartane Ninna vakya kelide
Ennu kevala ninnannonyakke Serodenna korike
Pallavi:
Ele nanna ele, priya kartane,
Ninna kruje kambakke
Ele nanna, ele, priya kartane,
Ninna tividedege!
2. Ninna sevege, priya raksaka ni pratisthisennannu
Dayapalisu drdhaniscaya! ninna citta nannadu
3. Nanu oragi ninna padakke susanvada madutta
Ninna sangada irva galige enthamulya santasa!
4. Talavillada pritisagara! bud’dhya tita harsave
Nanagagalu ninna darsana nitya stotra ninage!